Aisiri Farm

Aisiri Farm Contact information, map and directions, contact form, opening hours, services, ratings, photos, videos and announcements from Aisiri Farm, Mangalore, Dakshina Kannada District, Mangalore.

Agricultural Services, Animal Husbandry, Fertilizer, Shelter Services, Feeding Services, Vaccination Services, Shed Constructions, Soil Testing, Free Training & Advise, Equipment Supply, Manure Selling & Buying

ಮಾದರಿ ಸ್ವಚ್ಛ ಗ್ರಾಮ ಪುರಸ್ಕಾರ ಪಡೆದು ದೇಶದ ಗಮನ ಸೆಳೆದಿದ್ದ ಪುಟ್ಟ ಗ್ರಾಮ ಇರಾ ಇದೀಗ ರಾಜ್ಯದಲ್ಲೇ ಮತ್ತೂಂದು ವಿನೂತನ ಪ್ರಯೋಗಕ್ಕೆ ಸಾಕ್ಷಿಯಾ...
15/07/2021

ಮಾದರಿ ಸ್ವಚ್ಛ ಗ್ರಾಮ ಪುರಸ್ಕಾರ ಪಡೆದು ದೇಶದ ಗಮನ ಸೆಳೆದಿದ್ದ ಪುಟ್ಟ ಗ್ರಾಮ ಇರಾ ಇದೀಗ ರಾಜ್ಯದಲ್ಲೇ ಮತ್ತೂಂದು ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಸಮಗ್ರ ಕೃಷಿ, ಕುರಿ-ಮೇಕೆ ಮತ್ತು ಕತ್ತೆ ಸಾಕಾಣಿಕೆ ಹಾಗೂ ಸ್ಥಳಿಯ ಭಾಗದ ರೈತರಿಗೆ ಅನುಕೂಲವಾಗುವಂತೆ ಮಾದರಿ ತರಬೇತಿ ಕೇಂದ್ರ ನಮ್ಮ ನೆಚ್ಚಿನ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಶ್ರೀ ಆಬ್ದುಲ್ ರಜಾಕ್ ಕುಕ್ಕಜೆ, ಮಾಜಿ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶ್ರೀ ಚಂದ್ರಹಾಸ್ ಆರ್ ಕರ್ಕೇರ, ಮಾಜಿ ತಾಲುಕ್ ಪಂಚಾಯಿತಿ ಅಧ್ಯಕ್ಷರು, ಶ್ರೀ ಅಗ್ನೇಸ್ ಡಿಸೋಜ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಶ್ರೀ ಮೊಹಿದ್ದಿನ್ ಕುನ್ನಿ, ಉಪಾಧ್ಯಾಕ್ಷರು, ಇರಾ ಗ್ರಾಮ ಪಂಚಾಯತಿ, ಶ್ರೀ ಶ್ರೀನಿವಾಸ್ ಗೌಡ, ಸಂಸ್ಥಾಪಕ ಅಧ್ಯಕ್ಷರು ಮತ್ತು ಎಂ.ಡಿ, (ಐಸಿರಿ) ಮೈಂಡ್ ಓವೆಷನ್ಸ್, ಶ್ರೀಮತಿ ಜಯಶ್ರೀ ಆರ್ ಕರ್ಕೇರ, ಸಹ-ಸಂಸ್ಥಾಪಕರು ಮತ್ತು ನಿರ್ದೇಶಕರು, (ಐಸಿರಿ) ಮೈಂಡ್ ಓವೆಷನ್ಸ್, ಶ್ರೀ ಶ್ರೀಕಾಂತ್ ಕರ್ಕೇರ, ಸಂಸ್ಥಾಪಕ ಅಧ್ಯಕ್ಷರು, ಶಿರೋಹಿ ಫ಼ಾರ್ಮ ಇವರುಗಳ ಸಮ್ಮುಖದಲ್ಲಿ ಸಮಗ್ರ ಕೃಷಿ, ಕುರಿ-ಮೇಕೆ ಮತ್ತು ಕತ್ತೆ ಸಾಕಾಣಿಕೆ ಹಾಗೂ ಉಚಿತ ತರಬೇತಿ ಕೇಂದ್ರವೂ “ಶಿರೋಹಿ ಫ಼ಾರ್ಮ್” ಎಂಬ ನಾಮಂಕಿತದಿಂದ “ಐಸಿರಿ ತಂಡದ” (ಮೈಂಡ್ ಓವಷನ್ಸ್) ಸಹಯೋಗದಲ್ಲಿ ಇಂದು ಲೋಕಾರ್ಪಣೆಗೊಂಡಿದೆ. ಇದು ಒಂದು ವಿಭಿನ್ನ ಮತ್ತು ಹಲವು ವೈಶಿಷ್ಠತೆಯನ್ನು ಒಳಗೊಂಡಿದ್ದು ಇದು ಪ್ರಪ್ರಥಮ ಭಾರಿಗೆ ನಮ್ಮ ಕರ್ನಾಟಕದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಲಿದೆ.

https://timesofmysuru.com/era-village-sheep-goat-and-donkey-training-in-dakshina-kannada-district/

http://www.karavalitimes.in/2021/07/Ira-kuri-saakaanika-kendra-udghatane.html #.YO-HNAY0bdU.whatsapp

ನನ್ನ ಆತ್ಮೀಯ ಕೃಷಿಕ ಬಂಧುಗಳೇ, ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.ಸಮಗ್ರ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ...
10/06/2021

ನನ್ನ ಆತ್ಮೀಯ ಕೃಷಿಕ ಬಂಧುಗಳೇ,

ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.

ಸಮಗ್ರ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆ (ಕೃಷಿಕ)
(ಮೈಂಡ್ ಓವಷನ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ಒಂದು ಘಟಕ)

"ಕೃಷಿ ಕೇವಲ ಸಂಪತ್ತಲ್ಲ
ಅದೊಂದು ಸಮೃದ್ಧಿ . . .
ನಿರಂತರ ಕಾಯಕ
ನಿರಂತರ ಆದಾಯ. . .
ಸಮಯ-ತಾಳ್ಮೆ ಅತ್ಯಗತ್ಯ. . .!!!"

“ಕೃಷಿ ಆರಂಭವಾದಲ್ಲಿ, ಇತರೆ ಕಲೆಗಳು ಅದನ್ನು ಹಿಂಬಾಲಿಸುವುವು. ಆದ್ದರಿಂದ, ರೈತರೇ ಮಾನವ ನಾಗರೀಕತೆಯ ಸ್ಥಾಪಕರು”

ಕೃಷಿ ಕ್ಷೇತ್ರದಲ್ಲಿ ಕೃಷಿ ಬೇರೆ, ಕೃಷಿಕ ಬೇರೆ ಎಂಬ ನಿಲುವು ಬೆಳೆದಿರುವುದು ಮತ್ತು ಕೃಷಿಕ ಎಂಬ ಪದವನ್ನು ಬೆಳೆ ತೆಗೆಯುವವ ಎಂಬ ಅರ್ಥಕ್ಕೆ ಸೀಮಿತಗೊಳಿಸಿರುವುದು. ಕೃಷಿ ಕಾಲೇಜಿನಲ್ಲಾಗಲೀ, ಕೃಷಿ ಇಲಾಖೆಗಳ ಮೂಲಕವಾಗಲೀ ಕೊಡುತ್ತಿರುವ ಶಿಕ್ಷಣ ತಂತ್ರ-ಯಂತ್ರ ಪ್ರಧಾನವಾಗಿದ್ದು ಧ್ಯೇಯ ದೃಷ್ಟಿಯನ್ನು ಬೆಳೆಸುವಲ್ಲಿ ಅವುಗಳು ಇಂದಿಗೂ ಪ್ರಯತ್ನ ಹಾಕಿಲ್ಲ. ಕೃಷಿಕ ತಂತ್ರಗಳ ವಾಹಕ ಮಾತ್ರ !

ಕೃಷಿ ಉತ್ಪಾದನೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಸಮಗ್ರ ಕೃಷಿ ಪದ್ಧತಿಗಳು, ಪಶುಸಂಗೋಪನೆ, ಕುರಿ-ಮೇಕೆ ಮತ್ತು ಕತ್ತೆ ಸಾಕಾಣಿಕೆ ತುಂಬಾ ಸಹಕಾರಿಯಾಗಿದೆ. ಅನಿಶ್ಚಿತ ಮಳೆ, ಹವಾಮಾನ ವೈಪರಿತ್ಯಗಳಿಂದ ಕೃಷಿ ಉತ್ಪಾದನೆಯ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಬೆಳೆಗಳಿಂದ ಬರುತ್ತಿರುವ ಉತ್ಪಾದನೆಯು ಹಾಗೂ ಆದಾಯ ಕುಂಠಿತಗೊಳ್ಳುತ್ತಿದ್ದು, ಕಾರಣ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪಕಸುಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಉತ್ತಮ ಪಡಿಸುವುದರ ಜೊತೆಗೆ ವರ್ಷ ಪೂರ್ತಿ ರೈತರ ಕುಟುಂಬಕ್ಕೆ ಸಮಗ್ರ ಕೃಷಿ, ಕುರಿ-ಮೇಕೆ ಹಾಗೂ ಕತ್ತೆ ಸಾಕಾಣೆಯಿಂದ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ಹಾಗೂ ಪರ್ಯಾಯ ಮಾರ್ಗವನ್ನು ಕಲ್ಪಿಸುವುದೇ ಸಮಗ್ರ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ (ಕೃಷಿಕ) ಗುರಿಯಾಗಿದೆ.

ಸಮಗ್ರ ಸಾವಯವ ಕೃಷಿಯನ್ನು ಉತ್ತೇಜಿಸಲು ವ್ಯಾಪಕವಾದ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದೇವೆ ಮತ್ತು ಈ ಉತ್ಪನ್ನಗಳು ಸುಧಾರಿತ ಜೈವಿಕ ತಂತ್ರಜ್ಞಾನ ಮತ್ತು ಉತ್ತಮ ಬೇರುಗಳ ಬೆಳವಣಿಗೆ, ಚಿಗುರು ಅಭಿವೃದ್ಧಿಯ ಮೂಲಕ ಇಳುವರಿ, ಮಣ್ಣಿನ ಆರೋಗ್ಯವನ್ನು ಆಧರಿಸಿವೆ. ಮಣ್ಣಿನ ಕಂಡೀಷನಿಂಗ್ ಸಸ್ಯ ನೊರೋಧಕತೆ ಮತ್ತು ಸುಧಾರಿತ ಬೆಳೆ ಪೋಷಣೆಯ ಮೂಲಕ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳೆ ಇಳುವರಿ ಮತ್ತು ಅದರ ಗುಣಮಟ್ಟದಲ್ಲಿ ಸುಸ್ಥಿರ ಬೆಳವಣಿಗೆಗೆ ವಿವಿಧ ಉತ್ಪನ್ನಗಳನ್ನು ನೀಡುತ್ತದೆ. ಬೆಳೆ ಪೋಷಣೆ, ರೋಗ ತಡೆಗಟ್ಟುವಿಕೆ, ನಿರ್ವಹಣೆ, ಆಕ್ಟಿವೇಟರ್ ಗಳು ಮತ್ತು ಸ್ಟ್ರೆಡರ್, ಜೈವಿಕ ರಸಗೊಬ್ಬರಗಳು ಮತ್ತು ಬೆಳೆ ಜೈವಿಕ-ಉತ್ತೇಜಕಗಳು ಸೇರಿವೆ.

ಇತ್ತೀಚಿನ ದಿನಗಳಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಸಗೊಬ್ಬರಗಳ ಬೆಲೆ ಮತ್ತು ಕೀಟಾನಾಶಕಗಳ ಬೆಲೆ ಹೆಚ್ಚುತ್ತಿದೆ. ಇಂಧನ ವೆಚ್ಚವನ್ನು ಹೆಚ್ಚಿಸುವುದು, ಹಣದುಬ್ಬರವನ್ನು ಹೆಚ್ಚಿಸುವುದು, ಸಬ್ಸಿಡಿಗಳನ್ನು ಕಡಿಮೆ ಮಾಡುವುದು ಮತ್ತು ಬೆಳೆ ಇಳುವರಿಯನ್ನು ಕಡಿಮೆ ಮಾಡುವುದು ಪ್ರಮುಖ ಕಳವಳಕಾರಿ ಸಂಗತಿಯಾಗಿದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿಗಳು, ನೀರಿನ ಕೊರತೆ, ಮಣ್ಣು, ಕೀಟ, ಕಳೆ ಮತ್ತು ಸಸ್ಯ ರೋಗಗಳು, ಕೀಟನಾಶಕಗಳು, ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣು ಉತ್ಪತ್ತಿಯಾಗುತ್ತಿಲ್ಲ ಹಾಗೂ ಪಶುಸಂಗೋಪನೆ, ಕುರಿ-ಮೇಕೆ ಮತ್ತು ಕತ್ತೆ ಸಾಕಣಿಕೆಯಲ್ಲಿನ ತಪ್ಪು ನಿರ್ಧಾರಗಳು ರೈತರು ಕಂಗೆಡುವಂತೆ ಮಾಡಿದೆ.

ನಮ್ಮ ಸೇವೆಗಳು:

 ಉತ್ತಮ ತಳಿಗಳ ಆಯ್ಕೆ
 ಪ್ರಾಣಿಗಳ ಆರೈಕೆ
 ಪ್ರಾಣಿಗಳ ಖರೀದಿ ಮತ್ತು ಮಾರಾಟ
 ಆಯ್ಕೆ ಮತ್ತು ಸಂತಾನೋತ್ಪತ್ತಿ ಮಾದರಿ
 ಪಶುವೈದ್ಯಕೀಯ ಸೇವೆಗಳ ಬೆಂಬಲ
 ವಿಭಿನ್ನ ಶೆಡ್ಗಳ ನಿರ್ಮಾಣ
 ಮೇವು ಅಭಿವೃದ್ಧಿ
 ಹೆಚ್ಚಿನ ಇಳುವರಿ ಬೀಜಗಳ ಆಯ್ಕೆ
 ಮಣ್ಣಿನ ಜೈವಿಕ ಚಿಕಿತ್ಸೆ
 ಮಣ್ಣಿನ ಸ್ಥಿರೀಕರಣ
 ಮಣ್ಣಿನ ಮಾಲಿನ್ಯದ ಹಾನಿಕಾರಕ ಪರಿಣಾಮಗಳು
 ಉತ್ತಮ ರಸಗೊಬ್ಬರಗಳ ಆಯ್ಕೆ
 ಸಾವಯವ ಕೃಷಿ ಪ್ರಾಮುಖ್ಯತೆ
 ಸಾವಯವ ಗೊಬ್ಬರ ಬಳಕೆ
 ಕೃಷಿ ಮತ್ತು ಪಶುಸಂಗೋಪನೆ ತರಬೇತಿ
 ರೋಗ ನಿರ್ವಹಣೆ
 ನೇರ ಮಾರುಕಟ್ಟೆ ಒದಗಿಸುವುದು
 ಮಾರ್ಕೆಟಿಂಗ್ ನಿರ್ವಹಣೆ
 ಆಹಾರ ಮತ್ತು ಪೋಷಣೆ
 ಸೈಲೆಜ್ ಅಭಿವೃದ್ಧಿ
 ಕೃಷಿ ಉಪಕರಣಗಳ ಪೂರೈಕೆ

ಪಶುಸಂಗೋಪನೆ, ಕುರಿ-ಮೇಕೆ ಮತ್ತು ಕತ್ತೆ ಸಾಕಾಣಿಕೆಯಲ್ಲು ಸಹ ಬಹಳಷ್ಟು ಸುಧಾರಣೆಯನ್ನು ತಂದಿದ್ದು, ನಮ್ಮ ಹೆಮ್ಮೆಯ ಸಂಸ್ಥೆ ಸಮಗ್ರ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ (ಕೃಷಿಕ) ವತಿಯಿಂದ ತಳಮಟ್ಟದಲಿರುವ ಪ್ರತಿಯೊಬ್ಬ ಕೃಷಿಕಗೆ ಸರಿಯಾದ ಮಾರ್ಗದರ್ಶನ, ದಿಕ್ಷೂಚಿ, ತರಬೇತಿ ನಿಡುವಲ್ಲಿ ಯಶಸ್ವಿ ಅಭಿಯಾನವನ್ನು ಹಮ್ಮಿಕೊಂಡಿದೆ.

ಈ ಒಂದು ಪ್ರಯತ್ನದ ಫಲವನ್ನು ಎಲ್ಲ ರೈತ ಭಾಂದವರು ಉಪಯೋಗಿಸಿಕೊಳ್ಳಬೇಕೆಂದು ನಮ್ಮ ಕಳಕಳಿಯ ಮನವಿ.

ಈ ಒಂದು ನಿಟ್ಟಿನಲ್ಲಿ ನಮ್ಮೇಲ್ಲ ಕೃಷಿಕರಿಗೆ ಅನುಕೂಲವಾಗುವಂತೆ ಮತ್ತು ಕೃಷಿಯ ಮಾಹಿತಿ ಒದಗಿಸುವ ಸಲುವಾಗಿ "ಕೃಷಿಕ" ಎಂಬ ಹೆಸರಿನ ವಾಟ್ಸ್ ಆಪ್ಪ್ ಗ್ರೌಪ್ ಒಂದನ್ನು ರಚಿಸಲಾಗಿದ್ದು, ಎಲ್ಲ ನನ್ನ ಆತ್ಮೀಯ ಕೃಷಿಕರು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ ಸೇರ ತಕ್ಕದ್ದು ಮತ್ತು ಇದರ ಒಂದು ಸದುಪಯೋಗ ಪಡಿಸಿಕೊಳ್ಳುವುದು.

Follow this link to join my WhatsApp group: https://chat.whatsapp.com/BiSEmDZnSgw9VUf0xcGuWI

ಒಂದೇ ಸೂರಿನಡಿಯಲ್ಲಿ ನಮ್ಮ ಕೃಷಿ ಬಂಧುಗಳಿಗೆ ಅತ್ಯವಶ್ಯಕವಾಗಿ ಬೇಕಾಗುವ ಎಲ್ಲಾ ರೀತಿಯ ಕೃಷಿ ಸೇವೆಗಳು, ಮಾರ್ಗದರ್ಶನ, ನುರಿತ ತರಬೇತಿ ಹಾಗೂ ಸಾವಯವ ಪದಾರ್ಥಗಳನ್ನು ಒದಗಿಸಲಾಗುತ್ತದೆ.

ಹೆಚ್ಚಿನ ಮಾಹಿತಿ ಬಯಸುವವರು ಸ್ವವಿವರಗಳೊಂದಿಗೆ ನಮ್ಮನ್ನು ಈ ಕೂಡಲೇ ಸಂಪರ್ಕಿಸಬಹುದು.

ಶ್ರೀನಿವಾಸ್ ಗೌಡ ✒️
ಸ್ಥಾಪಕರು ಮತ್ತು ನಿರ್ದೇಶಕರು,
ವೃತ್ತಿಪರ ತರಬೇತುದಾರ ಮತ್ತು ಕೃಷಿ ಸಲಹೆಗಾರರು

ಸಮಗ್ರ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆ (ಕೃಷಿಕ)
(ಮೈಂಡ್ ಓವಷನ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನ ಒಂದು ಘಟಕ)

Address

Mangalore, Dakshina Kannada District
Mangalore
575001

Alerts

Be the first to know and let us send you an email when Aisiri Farm posts news and promotions. Your email address will not be used for any other purpose, and you can unsubscribe at any time.

Contact The Business

Send a message to Aisiri Farm:

Share