05/09/2026
ಇವತ್ತಿನ delivery — ಆದರೆ ಕಥೆ ಸ್ವಲ್ಪ ಬೇರೆ. 🙏
Madhu ಸಾರ್ — Champions Sports badminton court ನ ಮಾಲೀಕರು.
ಅವರ court ನಲ್ಲೇ ನಾವು "South West Bengaluru" SWB badminton 🏸
community ಶುರು ಮಾಡಿದ್ದು. ಆರಂಭದಿಂದ ನಮ್ಮ ಬೆಳವಣಿಗೆಗೆ
ಬೆನ್ನೆಲುಬಾಗಿ ನಿಂತವರು.
ನಿನ್ನೆ ಸಂಜೆ ಅವರಿಂದ call — 100 ಚೀಲ Maha Cement PPC, ಬಿಡದಿಗೆ.
ಆದರೆ ಎಲ್ಲಾ plan ಮಾಡಿದಂತೆ ನಡೆಯಲಿಲ್ಲ 👇
12 ಗಂಟೆಗೆ delivery ಅಂತ ಹೇಳಿದ್ದೆವು. Maha cement ಗೆ ಈಗ
ಎಲ್ಲಿಲ್ಲದ demand — factory ಯಿಂದ ನೇರ ಬಂದ 34 ಟನ್ truck
ನಿಂದ ನಮ್ಮ loading 2:45 ಆಯಿತು. 2 ಗಂಟೆ ತಡ.
ನಾವು ಮುಚ್ಚಿಡಲಿಲ್ಲ. Customer ಗೆ ಇದ್ದದ್ದು ಇದ್ದ ಹಾಗೆ ಹೇಳಿದೆವು.
ಅದೇ ದಿನ, 4 ಗಂಟೆಗೆ ಕೆಲಸ ಮುಗಿಸಿಕೊಟ್ಟೆವು. ✅
ದಾರಿಯಲ್ಲಿ ಮೈಸೂರು ರಸ್ತೆ toll ನಲ್ಲಿ ಊಟದ ವಿರಾಮ — ನಾಲ್ಕು
ಕಾರ್ಮಿಕರು, ಒಬ್ಬ driver, ಎಲ್ಲರ ಊಟ ನಮ್ಮದೇ. ನಾನೂ ಅವರ
ಜೊತೆಯೇ ಕೂತು ಊಟ ಮಾಡಿದೆ, ಚಹಾ ಕುಡಿದೆ. ☕
ಈ ಹುಡುಗರು ಬಿಸಿಲಲ್ಲಿ ಚೀಲ ಹೊರುತ್ತಾರೆ — ಅವರಿಗೆ ಗೌರವ
ಕೊಡದಿದ್ದರೆ ಈ ವ್ಯಾಪಾರಕ್ಕೆ ಅರ್ಥವೇ ಇಲ್ಲ.
Site ನಲ್ಲಿ ಮೊದಲು ಇಟ್ಟಿಗೆಯ bed — cement ನೆಲಕ್ಕೆ ತಾಗಿದರೆ
ಹಾಳಾಗುತ್ತದೆ. ನಂತರ 6ft × 4ft ಜಾಗದಲ್ಲಿ 10 ರ 10 stack,
100 ಚೀಲ, 5 ಅಡಿ ಎತ್ತರ. ಅಚ್ಚುಕಟ್ಟಾಗಿ. 💪
✅ ಪೂರ್ಣ GST bill — ನಿಮಗೆ GST ಇದ್ದರೆ input credit claim ಮಾಡಿ